ಕನ್ನಡ ಗೀತೆಗಳು - ಎಲ್ಲರಿಗೂ!!!
ಬಸ್ಸಿನಲ್ಲಿ ಇಂದು ಹೊರಟಿದ್ದೆ ಆಫೀಸು ಮುಗಿಸಿಕೊಂಡು
ಆಕಾಶವಾಣಿ ಪ್ರಸಾರ ಮಾಡುತಿತ್ತು ಹಾಡುಗಳ ದಂಡು
ಮಧುರ ತುಸು ಮಾತಿಗೆ ... ಮೈಮರೆತು ಮನಸ್ಸು ವಿಹಾರಿಸಿತು
ಮುಂಗಾರು ಮಳೆಯ ಹಾಡಿಗೆ ಮನ ಸ್ಪಂದಿಸಿತು
ಈ ಸುಮಧುರ ಗೀತೆಗಳನ್ನು ಕೇಳುತ್ತಾ ನಿದ್ದೆ ಬಂದಂತಾಯಿತು
ಯಾವುದೋ ಸದ್ದು ಕೇಳಿ ಕೆಲವೇ ಕ್ಷಣಗಳಲ್ಲಿ ತಟ್ಟನೆ ಎಚ್ಚರವಾಯಿತು
ಗಾಬರಿಯಿಂದ ಅತ್ತಿತ್ತ ನೋಡಿದೆ ಮಾರ್ಕೆಟ್ ಬಂದಿತೆಂದು
ಆಮೇಲೆ ಅರಿವಾಯಿತು ನಾನು ಕೆಂಪೆಗೌಡ ಬಸ್ಸನ್ನು ಹತ್ತಿದ್ದೇನೆಂದು
ರೇಡಿಯೋ ಮಿರ್ಚಿ ಇಂದ ಪ್ರಸಾರವಾದ ಹಾಡು ಅದೊಂದು
ಪಕ್ಕದಲ್ಲೇ ಕೂಗುತ್ತಿರುವಂತೆ ಕೇಳುವ ಧ್ವನಿಯೊಂದು
"ಹಳೇ ಪಾತ್ರೆ ಹಳೇ ಕಬ್ನ ಹಳೆ ಪೇಪರ್ . . . . . . "
ಇಂದೇ ತಿಳಿದು ಬಂತು ಇದೆ ಒಂದು ಹಾಡು ಹಾಗೆಂದು. . .
ನೆನೆಸಿಕೊಳ್ಳದಿರುವ ದೇವರಿದ್ದಿಲ್ಲ ಆಗ ಆ ಹಾಡನ್ನು ಕೇಳಿ
ಹೊಟ್ಟೆ ಹೊಡೆಯುವಂತೆ ನಕ್ಕಿದ್ದೇನೆ - ಹೇಗೆ ತಾನೆ ಸುಮ್ಮನಿರಲಿ, ನೀವೇ ಹೇಳಿ??
ಮನೆಗೆ ಬಂದ ಕೂಡಲೇ ಸ್ನೇಹಿತರಿಗೆ ತಿಳಿಸಿದೆ
ಅವರೆಂದರು "ಅಯ್ಯೋ ಬೆಪ್ಪೆ.. ಈಗಾಗಲೇ ಆ ಹಾಡು ಸೂಪರ್ ಹಿಟ್ ಆಗಿದೆ!!!"
ಶೀಷಾ ಪೇಪರ್ ಮಾರುವವರೇ, ಇನ್ನೇಕೆ ತಡೆ
ನಿಮಗೆಂದೇ ರಚಿಸಲಾಗಿದ ಈ ಹಾಡನ್ನು ಹಾಡುತ್ತಾ ಮುಂದೆ ನಡೆ ನಡೆ!!!