ಅರವತ್ತು ವಯಸ್ಸಾದರೂ ಇಪ್ಪತ್ಟಿಗಿಂತ ಚುರುಕೂ
ಅವರನ್ನು ನೋಡುತ್ತಲೆ ನಮಗೆ ಬೆರುಗು, ಆಮೇಲೆ ನಡುಗೂ
ನೋಡಲಿಕ್ಕೆ ಧಾರ್ವಾಡ್ ಪೇಡ
ಆದರೆ ಅವರ ಕಾಟ ಬೇಡ ಬೇಡ
ಹೀಗೊಂದು ದಿನ ನಾನು ಆರ್.ವಿ.ಸೀ.ಈ ಸೇರಿದೆ
ನನ್ನ ಗೆಳತಿ ಅಂದಳು - "ಇನ್ನ ನೀನು ಆಗೋದೇ"
ಯಾಕೆಂದು ಕೇಳಿದಾಗ ಆಕೆ ಅಂದಳು - "ಇಲ್ಲಿ ಕೊಡ್ತಾರೆ ತುಂಬಾ ಟಾರ್ಚರ್"
ಆಗ ಅರ್ಥವಾಗದಿದ್ದರೂ ಈಗ ತಿಳಿದುಕೊಂಡೆ ಆ ಟಾರ್ಚರ್ ಇದೆ ಎಷ್ಟು ಚುರ್ಚುರ್
ಮೂಡು ಸರಿ ಇದ್ದಾಗ ನಮ್ಮ ತಾತ butterscotch flavour
ಇಲ್ಲದಿದ್ದರೆ ದೂರ್ವಾಸ ಮುನಿ ನಮ್ಮ hitler
Short term memory loss ತಾತನಿಗೆ ನಮ್ಮ ಗಜಿನೀ ತರ
ಆದರೂ ಆಗಾಗ್ಗ punch dialogues ಬಿಡ್ತಾರೆ ನಮ್ಮ ರಜನೀ ತರ
ಮನೆಯಲ್ಲಿ ಇಲಿಯೂ ಹುಲಿಯೂ ಗೊತ್ತಿಲ್ಲವಾದರೂ
ಕ್ಲಾಸಿಗೆ ಗೋಲಿ ಹೊದೀಯೊಕ್ಕೆ ಬಿಡೊಲ್ಲ ನಮ್ಮ grandfatheru
ಬೇಸೆತ್ತು ಹೋಗಿದೆ ಜೀವನ
ಯಾವಾಗ ಮುಗಿಯುತ್ತೋ ಈ ಪಯಣ
ಇನ್ನೂ ಬರೆಯುತ್ತಾ ಹೋದರೆ ಇದು ಆಗುತ್ತೆ history
ಇಲ್ಲಿಗೆ ನಿಲ್ಲಿಸಿದರೆ ಇದು ಉಳಿಯುತ್ತೆ ಇದು mystery
PS: ಇದು mystery ಆಗೆಯೇ ಉಳಿಯಲಿ ಎಂದು ನನ್ನ ಬಯಕೆ. ಅದನ್ನು ನೀವು ಪಾಲಿಸುವಿರೆಂದು ನನ್ನ ಹರಕೆ :)