ಹೊಸ ವರ್ಷದ ಆಹ್ವಾನ :)
ಬಂತು ಬಂತು ಇನ್ನೊಮ್ಮೆ ಹೊಸ ವರ್ಷ
ನಮ್ಮೆಲ್ಲರ ಜೀವನದಲ್ಲಿ ತರಲು ಸಂತಸ ಮತ್ತು ಹರ್ಷ
ಕನಸುಗಳನ್ನು ನನಸಾಗಿಸಲು ನಮ್ಮ ಮುಂದಿಟ್ಟಿದೆ ಇನ್ನೊಂದು ಅವಕಾಶ
ನನಸಾಗಿರುವ ಕನಸುಗಳನ್ನು ನೆನೆಪಿಸಿಕೊಂಡು ಧೃಡ ಮಾಡಿಕೊಳ್ಳೋಣ ನಮ್ಮ ಆತ್ಮವಿಶ್ವಾಸ
ನಗೆ ಪ್ರೀತಿ ನಮ್ಮೊಂದಿಗ ಸದಾ ಇರಲೆಂದು ಪ್ರಾರ್ಥಿಸುವ
ಶಾಂತಿ ಸಹನೆ ಎಲ್ಲರಲ್ಲೂ ಬೆಳೆಯಲೆಂದು ಹಾರೈಸುವ
ಒಳ್ಳೇ ವಿಷಯಗಳನ್ನು ತಿಳಿಯುವ ಯತ್ನ ಮಾಡಲು ಹೂಡುವ ಒಂದು ಸಂಚಾ
ನಂತರ ಅವುಗಳನ್ನು ಅತ್ತಿತ್ತ ಹಂಚೋಣ ಕೊಂಚ
೨೦೦೮ ಸುಖ ದುಃಖಗಳಿಂದ ಕೂಡಿರುವ ನೆನಪಿನ ಓಲೆ
ಮತ್ತಷ್ಟು ಸುಮಧುರ ದಿನಗಳು ನೋಡಬೇಕೆಂದು ಹರಿಸುತ್ತಾ ನಾವಿಂದು ಬೀಸುವ ಹೊಸ ವರ್ಷದ ಜಾಲೆ
ಎಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳು!!!