ನೀನಾನಾದರೆ ನಾನೀನೇನಾ? - Play review  

Posted by Divya A L

ಹಲವಾರು ವರ್ಷಗಳ ನಂತರ ಇಂದು ನಾನು ಒಂದು ನಾಟಕ ಪ್ರದರ್ಶನವನ್ನು ನೋಡಲು ಹೋಗಿದ್ದೆ... ನಮ್ಮ "ರಂಗ ಶಂಕರ"ದಲ್ಲಿ "ನೀನಾನಾದರೆ ನಾನೀನೇನಾ" ಎಂಬುವ ಕಾಮೆಡೀ ನಾಟಕ ಇದು...

ವಿಲ್ಲಿಯಂ ಶೇಕ್ಸ್ಪಿಯರ್ ಅವರ "ಕಾಮೆಡೀ ಆಫ್ ಎರರ್ಸ್" ಆಧಾರಿತವಾದ ಈ ನಾಟಕವು ಅದ್ಭುತ ಕಲಾವಿದರಿಂದ ಪ್ರದರ್ಶಿಸಲ್ಪಟ್ಟಿತು. ಬಹಳ ಸರಳವಾಗಿ ನಿರ್ದೇಶಿಸಿದ್ದ ಇದನ್ನು ನೋಡೊಲು ಹೊರಟ ನಮಗೆ ಆನಂದವೋ ಆನಂದ... ಮೊದಲಿನ ಡೈಲಾಗ್ ಇಂದ ಕೊನೆಯ ಡೈಲಾಗ್ ತನಕ ಪ್ರೇಕ್ಷಕರ ಗಮನವನ್ನು ಸೆಳೆದಿದ್ದಲ್ಲದೇ, ಭರ್ಜರಿ ನಗೆಗಳ ಅಲೆಗಳನ್ನೇ ಎಬ್ಬಿಸಿತು. "ಡಬಲ್ ರೋಲ್" ನಲ್ಲಿರುವ ಇಬ್ಬರ ಜೋಡಿಗಳನ್ನು "ಲೈವ್" ಪ್ರದರ್ಶನದಲ್ಲಿ ಅದೆಷ್ಟು ಚೆನ್ನಾಗಿ ತೋರಿಸಿದ್ದಾರೋ... ವಸ್ತ್ರ ವಿನ್ಯಾಸ, ಸರಳವಾದ ಸಂಭಾಷಣೆ, ಸಣ್ಣ ಪುಟ್ಟ ಹಾಡುಗಳು, ತಮಾಷೆ, ಪ್ರತಿ ಪಾತ್ರದ ಅದರದೇ ಆದ ಆ ಕೌಶಲ್ಯತೆ,ವಿಶೇಷತೆ,ವಿಭಿನ್ನತೆ - ಅದ್ಭುತವಾಗಿತ್ತು. ಹೊಟ್ಟೆ ನೋವೋಕೆ ಶುರು ಆಗಿದ್ದು ನಿಲ್ಲಲ್ಲೇ ಇಲ್ಲ ನೋಡಿ... ಕೆನ್ಣೆಗಳಂತೂ ಊದಿವೆ ನಕ್ಕಿ ನಕ್ಕಿ....

ಚಲನ ಚಿತ್ರಗಳನ್ನು ನೋಡೋದಕ್ಕಿಂತ ಈ ನಾಟಕಗಳನ್ನು ನೋಡುವುದರಲ್ಲಿರುವ ಮಜಾನೇ ಬೇರೆ.... ಒಂದೇ ಶಾಟ್ ನಲ್ಲಿ ಕಲಾವಿದರು ಅದೆಷ್ಟು ಡೈಲಾಗ್ಸ್ ಹೇಳಿದರೋ... ಒಂದು ಚೂರು 'ಅಲ್ಲೋಲ ಕಲ್ಲೋಲ'ವಾಗದೆ.... ತುಂಬಾ ಸಹಜವಾದ ನಟನೆಯನ್ನು ಪ್ರದರ್ಶಿಸಿದರು.

ಸಿನಿಮಾ ಗು ಲೈವ್ ನಾಟಕಕ್ಕೂ ಅಜಗಜಾಂತರವಾದ ವ್ಯತ್ಯಾಸವಿದೆ. ಸೀನಮಾಗಳಲ್ಲಿ ಒಂದು ಡೈಲಾಗ್ ಸರಿ ಬರುವವರೆಗೂ ಅದೆಷ್ಟು ಶಾಟ್ ಗಳು ತೆಗಿತಾರೋ,,, ಆದರಿಲ್ಲಿ, ಎಲ್ಲವೂ "ಪರ್ಫೆಕ್ಟ್" ಆಗಿ ಇರಬೇಕು, ಒಂದೇ ಶಾಟ್ ನಲ್ಲಿ... ಕಲಾವಿದರ ಧ್ವನಿ ಗ್ರಹಣ (ವಾಯ್ಸ್ ಮಾಡುಲೇಶನ್), ಉಚ್ಛಾರಣೆ, ನಡೆ ನುಡಿಗಳ ತೀರು, ಮುಖ ಭಾವ ಇತ್ಯಾದಿಗಳ ಬಗ್ಗೆ ತುಂಬಾ ಗಮನ ಕೊಡಬೇಕಾಗುತ್ತದೆ... ಎಲ್ಲದಕ್ಕೂ ಪ್ರಮುಖವಾಗಿ ಕಲಾವಿದಾರ "ಟೈಮಿಂಗ್ ಆಫ್ ಡೈಲಾಗ್ ಡೆಲಿವರೀ ಅಂಡ್ ಕೋ-ಆರ್ಡಿನೇಶನ್" ಬಲು ಮುಖ್ಯವಾದದ್ದು...

ಒಟ್ಟಿನಲ್ಲಿ ಈ ನಾಟಕವು ಅತ್ಯುತ್ತಮವಾಗಿ ಪ್ರದರ್ಶನಗೊಂಡಿತು... ಮನಸ್ಸಿಗೆ ತುಂಬಾ ಸಂತಸ ಮತ್ತು ನಲಿವನ್ನು ತಂದಿದ್ದೆಂತ್ತು ನೂರು ಪಾಲು ಸತ್ಯ.

ನಾಟಕದ ವಿವರಗಳು:

This entry was posted on Sunday, August 14, 2011 at Sunday, August 14, 2011 . You can follow any responses to this entry through the comments feed .

0 comments

Post a Comment