20
Feb
ಮಾಯಾವಿ....
ನಿನ್ನ ನಿರೀಕ್ಷೆಯಲ್ಲಿ ಕಾಯ್ದಿಡಿಸಿ
ವಿಖರ ಗೊಂದಲದಲ್ಲಿ ಸಿಲುಕಿಸಿ
ಶಿಖರಧೆತ್ತರದಲ್ಲಿ ಮಾಸಿ
ಮರೆತು ಮರೆಯಾದೆಯ ಮಾಯಾವಿ!
ಹುಚ್ಚೆದ್ಧ ಬಿರುಗಾಳಿಯಂತೆ
ಗೊಗೆರೆಯುವ ಬಿರುಸಿನ ಮಳೆಯಂತೆ
ಹಚ್ಚ ಹಸುರಿನ ಮುಗುಳ್ನಗೆಯನ್ನು
ಕೊಚ್ಚಿಕೊಂಡು ಹೋಯ್ಢೆಯಾ, ಮಾಯಾವಿ!
ಗಗನದತ್ತ ಹಾಸಿವೆ ಕಣ್ಣುಗಳು
ಹಾರಿ ಹೋದವ ತಿರುಗಿ ನೋಡಲೆಂದು
ನೋಟ ಜಾರಿಸಲು ಯತ್ನಿಸುತ್ತಿವೆ ರವಿಕಿರಣಗಳು
ಸಿಲುಕದೆ ಕಾಪಾಡಿದೆ - ನಿನ್ನ ಛಾಯೆ, ಮಾಯಾವಿ!
ಜೀವನದೂಗುತ್ತಿದೆ ನಿನ್ನ ಅನ್ವೇಷಣೆಯಲ್ಲಿ
ನಿಶ್ಕಲ್ಮುಶವಾದ ಮನಸ್ಸಿನ ಹಾದಿಯಲ್ಲಿ
ಕಣ್ಮರೆಯಾಗಿಯೇ ಕಾಡುತ್ತಲಿರುವೆಯಾ?
ಇಲ್ಲಾ, ಮರಳಿ ಮಿನುಗುವೆಯಾ... ಮಾಯಾವಿ??